ಕನ್ನಡ ನಾಡು | Kannada Naadu

ನವಂಬರ್‌ 15ರಂದು  ಶನಿವಾರ  ಮಲೆನಾಡ ಬರಹಗಾರರ ವೇದಿಕೆಯಿಂದ ʼಕಾಡ ಸುರಗಿʼ ಪುಸ್ತಕ ಬಿಡುಗಡೆ

14 Nov, 2025

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಬರಹಗಾರರ ಸೃಜನಾತ್ಮಕ ಅಭಿವ್ಯಕ್ತಿಯ ವೇದಿಕೆಯಾಗಿ ʼಮಲೆನಾಡ ಬರಹಗಾರರ ವೇದಿಕೆʼ ರೂಪುಗೊಂಡಿದೆ. ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣ, ಚಿಂತನಾ ಕಮ್ಮಟಗಳು, ಸಮ್ಮೇಳನಗಳು ಹೀಗೆ ವಿಭಿನ್ನ ಯೋಜನೆಗಳನ್ನು ಹೊಂದಿರುವ ಈ ವೇದಿಕೆಯ ಮೊದಲ ಪುಸ್ತಕವಾಗಿ ʼಕಾಡ ಸುರಗಿʼ ಎಂಬ ನಲವತ್ತು ಮಲೆನಾಡು ಸಾಧಕರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿ ನವಂಬರ್‌ 15ರ ಶನಿವಾರ ಸಂಜೆ 5.30ಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. 

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪದ್ಮಶ್ರೀ ಗಿರೀಶ್‌ ಕಾಸರವಳ್ಳಿಯವರು ಕೃತಿಯನ್ನು ಬಿಡುಗಡೆ ಮಾಡಲಿದ್ದು,  ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್‌, ಪ್ರಖ್ಯಾತ ಗಾಯಕಿ ನಾಡೋಜ ಡಾ.ಬಿ.ಕೆ.ಸುಮಿತ್ರ, ಜವಹರಲಾಲ್‌ ನೆಹರು ತಾರಾಲಯದ ನಿರ್ದೇಶಕರಾದ ಡಾ.ಬಿ.ಆರ್.ಗುರುಪ್ರಸಾದ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು,  ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 

ಒಟ್ಟು ಹದಿನೆಂಟು ಲೇಖಕರ ಲೇಖನಗಳ ಕೃತಿಯನ್ನು ಮಂಡಗದ್ದೆ ಶ್ರೀನಿವಾಸಯ್ಯ, ಎಚ್.ಸಿ.ಚಿದಾನಂದ ಹೆಗ್ಗಾರು,ಎಚ್.ಸಿ.ಜಯಪ್ರಕಾಶ್‌ ಮತ್ತು ಎನ್.ಎಸ್.ಶ್ರೀಧರ ಮೂರ್ತಿಯವರನ್ನುಳ್ಳ ಸಂಪಾದಕ ಮಂಡಳಿ ಸಂಪಾದಿಸಿದ್ದು ಸಾಂಸ್ಕೃತಿಕ ಮಹತ್ವದ ಈ ಕಾರ್ಯಕ್ರಮ ಜರುಗಲಿದೆ ಎಂದು ಮಲೆನಾಡು ಬರಹಗಾರರ ವೇದಿಕೆಯ ಪರವಾಗಿ ಸಂಚಾಲಕರಾದ ಎಚ್.ಸಿ.ಜಯಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by